Translate

OUR VISITER ON DATE

Tuesday, October 6, 2015

INAGURATION OF ATM AT SHIVAMOGGA HOಶಿವಮೊಗ್ಗ ಪ್ರಧಾನ ಅಂಚೆ ಕಛೇರಿಯ ಬಳಿ ಸ್ತಾಪಿಸಲಾಗಿದ್ದ ಎ ಟಿ ಎಂ ನ್ನು ಶಿವಮೊಗ್ಗ ಕ್ಷೇತ್ರದ ಸಂಸದರಾದ ಮತ್ತು ಮಾಜಿ ಮುಖ್ಯಮಂತ್ರಿಗಳಾದ  ಶ್ರೀ ಯಡಿಯೂರಪ್ಪನವರು ದಿನಾಂಕ ೦೬.೧೦. ೧೫ ರಂದು ಉದ್ಘ್ಹಾಟಿಸಿದರು.   ನಂತರ ನೆಡೆದ ಸರಳ  ಸಮಾರಂಭದಲ್ಲಿ ಮಾತನಾಡಿದ ಅವರು - ಅಂಚೆ ಇಲಾಖೆ ಸೇವೆ ಅಭೂತಪೂರವವಾದದ್ದು.  ದೇಶದ ಪ್ರಧಾನಿ ಮೋದಿಯವರ  ಕನಸಿನ ಡಿಜಿಟಲ್ ಇಂಡಿಯ ಯೋಜನೆಗೆ ಎಲ್ಲಾ ಕ್ಷೇತ್ರದಲ್ಲೂ ಕ್ರಾಂತಿಯಾಗುತ್ತಿದೆ.  ಅದರಲ್ಲಿ ಅಂಚೆ ಇಲಾಖೆಯು ಒಂದು.  ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಅಂಚೆ ಇಲಾಖೆ ಮಾಡಿದ ಸಾಧನೆ ನಿಜಕ್ಕೂ ಪ್ರಶಂಸನೀಯ ಎಂದರು.  ಸಮಾರಂಭದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಶ್ರೀ ಕೆ.ಬಿ.ಪ್ರಸನ್ನ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೇಶದ ಏಳ್ಗೆಗಾಗಿ ಅಂಚೆ ಇಲಾಖೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಏಕೈಕ ಇಲಾಖೆ  ಎಂದರಲ್ಲದೆ ಇಂಧ ಸೇವೆ ಮಾಡುತ್ತಿರುವ ನೌಕರರನ್ನು ಶ್ಲಾಘಿಸಿದರು.  ಮಾಜೀ ಸಂಸದ ಮತ್ತು ಹಾಲಿ ಶಿಕಾರಿಪುರ ಕ್ಷೇತ್ರದ ಶಾಸಕರಾದ ಶ್ರೀ ಬಿ.ವೈ ರಾಘವೇಂದ್ರ ಮಾತನಾಡಿ , ಈ ಹಿಂದೆ ಅಂಚೆ ಇಲಾಖೆ ಮುಚ್ಚುವ ಯೋಚನೆ ಮಾಡಲಾಗುತ್ತಿತ್ತು.  ಇದೀಗ ಅಂಚೆ ಅಲೀಖೆ ಅದಕ್ಕೆ ಸದ್ದು ಹೊಡೆದು ಮೇಲೆದ್ದಿದೆ.  ಇಂದು ಇಲಾಖೆ ಅಧುನಿಕ ಯುಗದಲ್ಲೂ ಮುಚ್ಚುವ ಹಾಗಿಲ್ಲ ಬದಲಾಗಿ ಇನ್ನ್ನು ಹೆಚ್ಚು ಪೂರಕವಾಗಿದ್ ಎಂದರು.  ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ ಕೆ.. ರಾಮಲಿಂಗಯ್ಯ  ವಹಿಸಿದ್ದರು.  ಶ್ರೀಮತಿ ಹೆಚ್.ಮೀರಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಪ್ರಧಾನ ಅಂಚೆ ಕಛೇರಿಯ ಅಂಚೆ ಪಾಲಕರಾದ ಶ್ರೀ ಶಿವರಾಮನ್  ಸ್ವಾಗತಿ ಸಿದರೆ.  ಶ್ರೀ ಪ್ರಕಾಶ್ ರಾವ್ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ನೆರವೇರಿಸಿದರು.  ಶ್ರೀ ಎಸ . ಚಂದ್ರಶೇಖರ್ ರವರು ಕಾರ್ಯಕ್ರಮ ನಿರೂಪಣೆ  ಮಾಡಿದರು.  ಸಹಾಯಕ  ಅಧೀಕ್ಷಕರಾದ  ಶ್ರೀ ಎನ್. ಜಿ. .ಬಸನಕಟ್ಟಿ ಯವರು  ವಂದನಾರ್ಪಣೆ  ಮಾಡಿದರು.

           ಇದೇ ಸಂಧರ್ಭದಲ್ಲಿ ಅಖಿಲ  ಭಾರತ ಅಂಚೆ ನೌಕರರ ಸಂಘಟನೆಯಿಂದ  ಸಂಸದರಿಗೆ   ಮನವಿಪತ್ರ   ಅರ್ಪಿಸಲಾಯಿತು.  ಪೂರಕವಾಗಿ ಸ್ಪಂದಿಸಿದ ಶ್ರೀಯುತರು ಇದಕ್ಕೆ ತಮ್ಮ ಕೈಯಿಂದಾಯುವ ಎಲ್ಲ ಸಹಕಾರ ಮಾಡುವುದಾಗಿ ತಿಳಿಸಿದರು. 

No comments:

Post a Comment