Translate

OUR VISITER ON DATE

Thursday, July 1, 2010

ಎನ್,ಎಫ್,.ಪಿ,ಇ ಫೆಡರಲ್ ಕೌನ್ಸಿಲ್

ಇತ್ತೀಚಿಗೆ ಎನ್,ಎಫ್,ಪಿ,ಇ,ಸಂಘದ ಎಂಟನೆ ಫೆಡರಲ್ ಕೌನ್ಸಿಲ್ ಸಭೆ ನವದೆಹಲಿಯ ಮಾವಲಂಕರ್ ಸಭಾ ಭವನದಲ್ಲಿ ವೈಭವದಿಂದ ಜರುಗಿತು. ಈ ಸಭೆಯಲ್ಲಿ ಸಂಘದ ಮಾಜಿ ಕಾರ್ಯದರ್ಶಿಗಳಾದ ಕಾಂ. ಸಿ,ಸಿ, ಪಿಳ್ಳೈ ಅಲ್ಲದೆ ಇಲಾಖೆಯ ಪಿ.ಎಲ್,ಐ ವಿಭಾಗದ ಮುಖ್ಯಸ್ತರಾದ ಶ್ರೀ ಉದಯ ಬಾಲಕೃಷ್ಣನ್ ಬಾಗವಹಿಸಿದ್ದರು. ಮುಂದಿನ ಸಾಲಿಗಾಗಿ ಕಾಂ.ಎಂ. ಕೃಷ್ಣನ್ ರವರು ಸೆಕ್ರೆಟರಿ ಜನರಲ್ ಆಗಿ ಹಾಗು ಕರ್ನಾಟಕ ವಲಯದ ಪೋಸ್ಟ್ ಮ್ಯಾನ್ ಮತ್ತು ಗ್ರೂಪ್ ಡಿ ಸಂಘದ ವಲಯ ಕಾರ್ಯದರ್ಶಿ ಕಾಂ. ಸೀತಾಲಕ್ಷ್ಮಿ ರವರು ಅಸ್ಸಿಸ್ಟ೦ಟ್ ಸೆಕ್ರೆಟರಿ ಜನರಲ್ ಆಗಿ ಸರ್ವಾನುಮತದಿಂದ ಆಯ್ಕೆಯಾದರು. ಹೊಸದಾಗಿ ಆಯ್ಕೆಯಾದ ಎಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರುಗಳಿಗೆ ಶಿವಮೊಗ್ಗ ಪೋಸ್ಟ್ ಅಭಿನಂದನೆ ಸಲ್ಲಿಸುತ್ತದೆ.
ಶುಭ ಹಾರೈಕೆಗಳು
ಇದುವರೆವಿಗೂ ಎನ್.ಎಫ್.ಪಿ.ಇ ಸಂಘದ ಸೆಕ್ರೆಟರಿ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಹಾಗು ಗ್ರೂಪ್ ಸಿ ಸಂಘದಲ್ಲೂ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಕಾಂ. ಕೆ. ರಾಘವೇ೦ದ್ರನ್ ದಿನಾಂಕ ೩೦.೦೬.೨೦೧೦ ರಿಂದ ಸೇವೆಯಿಂದ ನಿವೃತ್ತರಾಗಿದ್ದಾರೆ. ಇವರ ನಿವ್ರತ್ತ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಶಿವಮೊಗ್ಗ ಪೋಸ್ಟ್ ಹಾರೈಸುತ್ತದೆ.

No comments:

Post a Comment