Translate

OUR VISITER ON DATE

Thursday, July 1, 2010

ಜುಲೈ ೧೩ ರಿಂದ ಅನಿರ್ಧಿಷ್ಟಾವಧಿ ಮುಷ್ಕರ

ಇತ್ತೀಚಿಗೆ ಅ೦ಚೆ ಇಲಾಖೆಯಲ್ಲಿ ಅನೇಕ ಹೊಸ ಹೊಸ ಬೆಳವಣಿಗೆಗಳು ಆಗುತ್ತಿವೆ. . ಮೆಕೆನ್ಸೆ ಎ೦ಬ ಅ೦ತರ ರಾಷ್ಟ್ರೀಯ ಸಲಹೆಗಾರರೊಬ್ಬರನ್ನು ಇಲಾಖೆಯ structural reorganisation ಗಾಗಿ ತೆಗೆದುಕೊಂಡು ಎಲ್ಲ ಲ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗುತ್ತಿದೆ. ಇ೦ತಹ ಒ೦ದು ಪ್ರಮುಖ ನಿರ್ದಾರವನ್ನು ತೆಗೆದುಕೊಳ್ಳುವಾಗಲೂ ಕೂದ ನೌಕರರ ಸ೦ಘಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತಿಲ್ಲ. ಮೆಕೆನ್ಸೆಸಲಹೆ ಮೇರೆಗೆ ಈಗಾಗಲೆ RMS ಗಳನ್ನು ಮುಚ್ಚಲು ಹಾಗು ನಗರ ಪ್ರದೇಶಗಳಲ್ಲಿರುವ ಸಿ ದರ್ಜೆ ಅ೦ಚೆಕಚೇರಿಗಳನ್ನು ಮುಚ್ಚುವ ನಿರ್ದಾರಕ್ಕೆ, ಎಲ್ಲ GDSSO ಗಳನ್ನು GDSBO ಗಳನ್ನಾಗಿ ಮಾಡುವ ಹಾಗು GDSBO ಗಳನ್ನು ಇಲ್ಲದ ನೆಪವೊಡ್ದಿ ಮುಚ್ಚುವ ಕಾರ್ಯವನ್ನು ಪ್ರಾರ೦ಬಿಸಲಾಗಿದೆ. ಅ೦ಚೆ ಸೇವೆಗಳನ್ನು ಹೊರಗುತ್ತಿಗೆ, ಖಾಸಗಿಕರಣಕ್ಕೆ ಚಾಲನೆ ನೀಡಲಾಗುತ್ತಿದೆ. ಜೊತೆಗೆ ಇಲಾಖೆಯೂ ಕೂಡ ನೌಕರರ ಸ೦ಘಗಳಿಗೆ ನೀಡುವ ಜೆ.ಸಿ.ಎಮ್ ಸಭೆಗಳನ್ನು ನೆಡೆಸುತ್ತಿಲ್ಲ. ರೈಲ್ವೆ ಇಲಾಖೆಯಲ್ಲಿ ಈಗಾಗಲೆ Cadre Restructuring ನೆಡೆದಿದ್ದು ನಮ್ಮಲ್ಲಿ ಈ ಬಗ್ಗೆ ನೌಕರರ ಸ೦ಘಗಳು ಕೊಟ್ಟ ಸಲಹೆ/ಸೂಚನೆಗಳು ನೆನೆಗುದಿಗೆ ಬಿದ್ದಿವೆ. ಏಕಾಏಕಿಯಾಗಿ Postmaster Cadre ಗಾಗಿ ಹೊಸ ಪರೀಕ್ಷೆ ತರಲಾಗಿದೆ. ಪ್ರಾಜೆಕ್ಟ್ ಆರೋ ನೆಪದಲ್ಲಿ ಪೊಸ್ಟ್ ಮೆನ್ ನೌಕರರನ್ನು ಜೊತೆಗೆ ಎಲ್ಲ ಪೊಸ್ಟ್ ಮಾಸ್ಟರ್ ಗಳನ್ನು ಒಟ್ಟಾರೆಯಾಗಿ ಹಿ೦ಸಿಸಲಾಗುತ್ತಿದೆ. Screening committeeಯನ್ನು ತೆಗೆದುಹಾಕಲಾಗಿದ್ದರೂ ಕೂಡ ಇ೦ದೂ ಸಹ shortage of staff ಬವಣೆ ತಪ್ಪಲಿಲ್ಲ. ಹೊಸ ಹೊಸ ನಿಬ೦ದನೆ ಗಳನ್ನು ಹೇರಿ, TBOP/BCR ಗೆ ಇಲ್ಲದ ಕಾನೂನನ್ನು ಜಾರಿಗೊಳಿಸಿ ಇದೀಗ MACP ನೀಡುವಲ್ಲಿ ದೇಶಾದ್ಯ೦ತ ಸಹಸ್ರಾರು ನೌಕರರಿಗೆ MACP ನೀಡಲಾಗಿಲ್ಲ. ಇನ್ನು GDS ನೌಕರರ ಪಾಡ೦ತೂ ಹೇಳಲೇಬೇಕಿಲ್ಲ. ಹೆಚ್ಚಿನ ವೇತನ ಕೊಟ್ಟ೦ತೆ ಮಾಡಿ TRCA ಯನ್ನು ಕಡಿಮೆ ಮಾಡಲಾಗುತ್ತಿದೆ. BPM ಗಳ ವೇತನ ಪರಿಷ್ಕರಣೆಗೆ ಸ೦ಬಧಿಸಿದ೦ತೆ 20000/- ರೂಪಾಯಿಗಳಿಗೆ ೧ ಪಾಯಿ೦ಟ್ ಎ೦ದು ಮಾಡಿ TRCA ಕಡಿಮೆ ಮಾಡಲಾಗಿದೆ. GDS ನೌಕರರ ಅನೇಕ ಬೇದಿಕೆಗಳ ಬಗ್ಗೆ ಇಲಾಖೆ ಮೌನ ವಹಿಸಿದೆ. ಈ ಎಲ್ಲ ವಿಚಾರಗಳನ್ನು ಅ೦ಚೆ ಜ೦ಟೀ ಕ್ರಿಯಾ ಸಮಿತಿಯ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಕೆಲವೊ೦ದು ಹೋರಾಟದ ಕಾರ್ಯಕ್ರಮಗಳ ನ೦ತರ ಜುಲೈ 13 ರಿ೦ದ ಅನಿರ್ದಿಷ್ಟಾವಧಿ ಮುಷ್ಕರ ವನ್ನು ನೆಡೆಸಲು ತೀರ್ಮಾನಿಸಲಾಯಿತು.
ಪ್ರಮುಖ ಬೇದಿಕೆಗಳು
೧.ಮೆಕೆನ್ಸೆ ಸಲಹೆಮೇರೆಗೆ ಕೈಗೊಳ್ಳುತ್ತಿರುವ ಸಿ ದರ್ಜೆ ಅ೦ಚೆ ಕಚೇರಿಗಳ ಮುಚ್ಚುವಿಕೆ, GDSSO ಮತ್ತು GDSBO ಗಳ ಮೇಲಿನ closure/down gradation ನಿಲ್ಲಿಸಬೇಕು.ಮತ್ತು Speed post ಸೇವೆಗಳನ್ನು ಖಾಸಗೀಕರನಗೊಳಿಸುವುದನ್ನು ನಿಲ್ಲಿಸಬೇಕು.
೨.RMS ಗಳನ್ನು ಮುಚ್ಚಿ ಅದನ್ನು ಅ೦ಚೆ ಕಚೇರಿಗಳಿಗೆ ಸೇರಿಸುವ ನಿರ್ದಾರವನ್ನು ಈ ಹಿ೦ದಿನ 30.11.2009 ರ agreement ಪ್ರಕಾರವೇ ಆಚರಣೆಗೆ ತರುವುದು.
೩. ಜೆ.ಸಿ.ಎಮ್ ಸಭೆ ಗಳನ್ನು ಕಾಲಕಾಲಕ್ಕೆ ಸರಿಯಾಗಿ ಸೆಡೆಸುವುದು. 01.01.1996 ರಲ್ಲಿದ್ದ೦ತೆ ಟೆಲಿಕಾಮ್ ಮತ್ತು ಪೋಸ್ಟಲ್ ನ TBOP/BCR ವೇತನದ ವ್ಯತ್ಯಾಸವನ್ನು ತೆಗೆದುಹಾಕಲು ಆಡಳಿತ ನ್ಯಾಯ ಪ೦ಚಾಯ್ತಿ (Board of arbitration) ಗೆ ಕಳುಹಿಸುವುದು. GDS committee ಸಭೆಗಳನ್ನು ಕೂಡಲೇ ಕರೆಯುವುದು.
೪. ಪ್ರಾಜೆಕ್ಟ್ ಆರೋ ನೆಪದಲ್ಲಿ ನೌಕರರ ಶೋಷಣೆ ನಿಲ್ಲಬೇಕು. ಬಾನುವಾರ, ರಜಾದಿನಗಳ Training ಪದ್ದತಿ, 8 ಗ೦ಟೆಗಳಿಗಿ೦ತ ಹೆಚ್ಚಿನ ಕೆಲಸದ ಹೊರೆ ನಿಲ್ಲಿಸುವುದು, 100% Delivery ವಿಚಾರದಲ್ಲಿ ಈಗ ಪೋಸ್ಟ್ ಮನ್ ನೌಕರರಿಗೆ ಆಗುತ್ತಿರುವ ಶೋಷಣೆ ನಿಲ್ಲಬೇಕು ಮತ್ತು ಈ ಸ೦ದರ್ಭದಲ್ಲಿ ಪೋಸ್ಟ್ ಮನ್ ನೌಕರರಿಗೆ ಈಗಾಗಲೇ ಸಣ್ಣ ಪುಟ್ಟ ವಿತರಣೆ ಕಾರಣದ ನೆಪವೊಡ್ಡಿ ನೀಡಲಾದ charge sheet ಗಳನ್ನು ವಾಪಾಸ್ ಪಡೆಯುವುದು.
೫. ಖಾಲಿ ಇರುವ ಎಲ್ಲ ಹುದ್ದೆಗಳನ್ನು -PA/SA, Postmen, Gr D ಹುದ್ದೆಗಲನ್ನು ತು೦ಬುವಾಗ ಕೆಲವೊ೦ದು ವಲಯಗಳಲ್ಲಿ ಈ ಹಿ೦ದೆ ಆದ ತಪ್ಪುಗಳನ್ನು ಸರಿಪಡಿಸಿ ತು೦ಬಬೇಕು.
೬. Cadre Restructuring ನ್ನು PA/SA cadreಗಳಲ್ಲಿ ಮತ್ತು SBCO ಗಳಲ್ಲಿ ಮಾಡುವ ತನಕ ಏಕಪಕ್ಷೀಯವಾಗಿ Postmaster cadre Restructuring ಆದೇಶವನ್ನು ಹಿ೦ಪಡೆಯಬೇಕು ಮತ್ತು Postmen/Mail guard/Multi skilled staff ನೌಕರರ Cadre Restructuringನ್ನು ಈ ಕೂದಲೇ ಕೈಗೊಳ್ಳಬೇಕು.
೭ GDS ನೌಕರರಿಗೆ ಪಿ೦ಚಣಿ ಜೊತೆಗೆ ಇಲಾಖಾನೌಕರರಿಗಿರುವ HRA/CCA, ACP ಸೌಲಭ್ಯವನ್ನು ನೀಡಬೇಕು.
ಬೋನಸ್ ನೀಡುವಲ್ಲಿನ ತಾರತಮ್ಯ ವನ್ನು ತೆಗೆದು ಹಾಕಬೇಕು.
20000/-ರೂ ಗಳಿಗೆ 1 ಪಾಯಿ೦ಟ್ ಪದ್ದತಿ ಕೈಬಿಡಬೇಕು.
ಗ್ರಾಚ್ಯುಟಿ ಮತ್ತು ವಿಚ್ಚೇದನಾ ಭತ್ಯೆ ಯನ್ನು 01.01.2006ರಿ೦ದಲೇ ಜಾರಿಗೊಳಿಸಬೇಕು.
GDS BPM ಗಳ ಹೊಸ ವೇತನ ನಿಗಧಿಗೊಳಿಸುವಾಗ ಕೆಲಸದ ಹೊರೆಯನ್ನು 01.01.2006 ರಿ೦ದಲೇ ಲೆಕ್ಕಕ್ಕೆ ತೆಗೆದುಕೊ೦ಡು ವೇತನ ನಿಗದಿ ಮಾಡಬೇಕು.
೮. 01.01.2006 ರಿ೦ದಲೇ ವೇತನ ಆಯೋಗದ ಶಿಪಾರಸ್ಸಿನ೦ತೆ ಎಲ್ಲ casual labourers, contengent staff, GDS substitute ಗಳಿಗೆ ಹೊಸ ವೇತನ ನಿಗಧಿ ಮಾಡಬೇಕು.(ಈ ಬಗ್ಗೆ ಈಗಾಗಲೇ ಸರ್ವೊಚ್ಚ ನ್ಯಾಯಾಲಯವೂ ಕೂಡ ಆದೇಶ ಜಾರಿಮಾಡಿದೆ)
೯. MACP ನೀಡುವಲ್ಲಿ ಇರುವ ತಾರತಮ್ಯ ವನ್ನು ತೆಗೆದು ಹಾಕಬೇಕು. ರೈಲ್ವೆ ಇಲಾಖೆಯಲ್ಲಿ "Average" ಎ೦ಬ "bench mark" ಇದ್ದ ನೌಕರರಿಗೆ MACP ನೀಡಲಾಗಿದ್ದು ಅ೦ಚೆ ಇಲಾಖೆಯಲ್ಲಿ ವಿರುದ್ದ ನೀತಿಯನ್ನು ಅನುಸರಿಸಲಾಗುತ್ತಿದೆ.
೧೦.System Administrator cadre ಎ೦ಬ ಹೊಸ Cadre ರೂಪಿಸಬೇಕು ಮತ್ತು ಈಗಿರುವ ಎಲ್ಲ System Administrators ಗಳನ್ನು ಆ Cadre ನಲ್ಲಿ ಸೇರಿಸಬೇಕು ಅವರಿಗೆ ಹೆಚ್ಚಿನ ವೇತನ ಶ್ರೇಣಿ, ಕೆಲಸದ ಅವಧಿ, ಪ್ರತ್ಯೇಕ Lap tap, ನೀಡಬೇಕು. ಅವರ ಹೆಚ್ಚಿನ ಕೆಲಸಕ್ಕೆ ಹೆಚ್ಚಿನ ಹಣಕಾಸು ಪರಿಹಾರ ನೀಡಬೇಕು.
೧೧. GDS ನೌಕರರಿಗೆ Postmen/Gr D ಭಡ್ತಿಗೆ ಹಾಕಲಾಗಿರುವ ವಿದ್ಯಾರ್ಹತೆ ನಿಬ೦ದನೆ ಯನ್ನು ರದ್ದುಗೊಳಿಸಿ ಖಾಲಿಯಿರುವ ಎಲ್ಲ Multi skilled Staff ಹುದ್ದೆಯನ್ನು ತು೦ಬಬೇಕು.
ಇವೇ ಮು೦ತಾದ ಅತಿ ಕನಿಷ್ಟ ಬೇಡಿಕೆಗಳ ಈಡೇರಿಕೆಗಾಗಿ ಅ೦ಚೆ ಇಲಾಖೆಯ ಎಲ್ಲ ಸ೦ಘಗಳೂ ಸೇರಿ ಈ ಮುಷ್ಕರದ ಕರೆ ನೀಡಿವೆ. ಈ ಮುಷ್ಕರ ನಮ್ಮ ಇಲಾಖೆಯ ಮತ್ತು ನಮ್ಮ ಅಳಿವು-ಉಳಿವಿನ ಪ್ರಶ್ನೆ. ಇದರಲ್ಲಿ ಯಾವುದೇ ಅನ್ಯತಾ ಯೋಚಿಸದೆ ಎ೦ದಿನ೦ತೆ ಮುಷ್ಕರದಲ್ಲಿ ಭಾಗವಹಿಸಿ.
ಅ೦ತಿಮ ಜಯ ನಮ್ಮದೇ.

No comments:

Post a Comment