Translate

OUR VISITER ON DATE

Saturday, April 10, 2010

ನಮ್ಮ ಸಂಘಗಳ ೨೬ನೆ ವಲಯ ಅಧಿವೇಶನವು ಮಂಗಳೂರಿನಲ್ಲಿ ದಿ ೦೪.೦೪.೨೦೧೦ ರಿಂದ ೦೭.೦೪.೧೦ ರ ವರೆಗೆ ವೈಭವದಿಂದ ನೆರವೇರಿತು. ಶ್ರೀಕ್ಷೇತ್ರ ಒಡಿಯೂರು ಮಠದ ಶ್ರೀ ಗುರು ದೇವಾನಂದ ಸ್ವಾಮಿ ಗಳು ಅಧಿವೇಶನವನ್ನು ಉದ್ಘಾಟಿಸಿದರು. ಸೇವೆಗೂ ತ್ಯಾಗಕ್ಕೂ ಅವಿನಾಭಾವ ಸಂಭಂದವಿದೆ ನಿಸ್ವಾರ್ಥ ಸೇವೆ ತ್ಯಾಗದಿಂದ ಕೂಡಿದ ಸೇವೆ. ವಿಶ್ವದ ಶ್ವಾಸ ಇದೆ ಎಂದರೆ ಅದು ವಿಶ್ವಾಸ. ಸಂಘಟನೆಗಳು ಸಮಾಜಕ್ಕೆ ಪೂರಕವಾಗಿರಬೇಕು ಮಾರಕವಾಗಿರಬಾರದು. ಇಂತಹ ಸಂಘಟನೆಗಳಿಂದ ವ್ಯಕ್ತಿ ಪರಿಶುದ್ದನಾಗುತ್ತಾನೆ. ಅಂತಹ ಸಂಘಟನೆ ನಿಮ್ಮದಾಗಬೇಕು. ಮನುಷ್ಯ ಉಳಿಯಲಿಕ್ಕೆ ಶ್ವಾಸ ಸಾಕು ಆದರೆ ಬದುಕಲಿಕ್ಕೆ ವಿಶ್ವಾಸ ಬೇಕು- ಎಂದು ತಮ್ಮ ಆಶೀರ್ವಚನ ನೀಡಿದರು. ಮುಖ್ಯ ಅಥಿತಿಗಳಾಗಿ ಬಾಗವಸಿದ್ದ ಮಾಜಿ ಹಣಕಾಸು ಸಚಿವ ಶ್ರೀ ಜನಾರ್ಧನ ಪೂಜಾರಿ -ಅಂಚೆ ಸೇವೆ ಉದಾತ್ತವಾದ ಸೇವೆ. ದೇಶ ಕಟ್ಟುವಂತ ಸೇವೆ. ಅಂತಹಾ ಸೇವೆಯನ್ನು ನೀವು ಮಾಡುತ್ತಿದ್ದೀರಿ. ನಿಮಗೆ ಖಂಡಿತಾ ಒಳ್ಳೆಯದಾಗುತ್ತದೆ ಎಂದರು. ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕಾರಂತ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು, ಎನ್,ಎಫ್, ಪಿ, ಇ ಯ ಮಹಾ ಕಾರ್ಯದರ್ಶಿ ಕಾಂ.ರಾಘವೇಂದ್ರನ್, ಗ್ರೂಪ್ ಸಿ ಸಂಘದ ಪ್ರಧಾನ ಕಾರ್ಯದರ್ಶಿ ಕಾಂ. ಕೆ. ವಿ. ಶ್ರೀಧರನ್, ಪೋಸ್ಟ್ ಮೆನ್ ಸಂಘದ ಪ್ರಧಾನ ಕಾರ್ಯದರ್ಶಿ ಕಾಂ. ಈಶ್ವರ್ ಸಿಂಗ್ ದಭಾಸ್, ಇಲಾಖೇತರ ಸಂಘದ ಪ್ರಧಾನ ಕಾರ್ಯದರ್ಶಿ ಕಾಂ.ಮಹಾದೇವಯ್ಯ ಎಸ್.ಎಸ್, ಮುಂತಾದವರು ಸಭೆಯಲ್ಲಿ ಉಪಸ್ತಿತರಿದ್ದರು. ಸುಮಾರು ೨೦೦೦ ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಸಿದ್ದರು. ನಂತರ ನಡೆದ ವಿಷಯ ನಿಯಾಮಕ ಸಭೆಯಲ್ಲಿ ಗ್ರೂಪ್ ಸಿ ಸಂಘಕ್ಕೆ ಕಾಂ ಎಸ್, ಎಸ್, ಮಂಜುನಾಥ್, ಪೋಸ್ಟ್ ಮೆನ್ , ಗ್ರೂಪ್ ಡಿ ಸಂಘಕ್ಕೆ ಕಾಂ. ಸೀತಾಲಕ್ಷ್ಮಿ ಹಾಗು ಇಲಾಖೇತರ ಸಂಘಕ್ಕೆ ಕಾಂ ಅಣ್ಣಪ್ಪ ಅವರುಗಳು ವಲಯ ಕಾರ್ಯದರ್ಶಿಗಳಾಗಿ ಅವಿರೋಧವಾಗಿ ಆಯ್ಕೆಯಾದರು. ನಮ್ಮ ವಿಭಾಗದಿಂದ ಕಾಂ. ಪ್ರಕಾಶ್ ರಾವ್ ರವರು ಗ್ರೂಪ್ ಸಿ ವಲಯಸಂಘದ ಹಣಕಾಸು ಕಾರ್ಯದರ್ಶಿ ಯಾಗಿ, ಕಾಂ ಕೆ. ಎಸ್. ರಂಗನಾಥ್ ರವರು ಪೋಸ್ಟ್ ಮೆನ್ ವಲಯ ಸಂಘದ ವಲಯ ಅಧ್ಯಕ್ಷ ರಾಗಿ ಕಾಂ.ಹೆಚ್. ಆರ್. ಈಶ್ವರಪ್ಪ ವಲಯ ಖಜಾಂಚಿ ಯಾಗಿ ಮತ್ತು ಕಾಂ, ಪ್ರಹ್ಲಾದ ರಾವ್ ರವರು ಇಲಾಖೇತರ ಸಂಘದ ವಲಯ ಅಧ್ಯಕ್ಷ ರಾಗಿ ಅವಿರೋಧ ವಾಗಿ ಆಯ್ಕೆಯಾದರು.

No comments:

Post a Comment