ಇತ್ತೀಚಿಗೆ ಅಂದರೆ ೧೯.೦೧.೨೦೧೧ ರಂದು ಗಾಜಿಯಾಬಾದ್ ನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ತರಬೇತಿ ಶಿಬಿರದಲ್ಲಿ ಮಾತನಾಡುತ್ತ ನಮ್ಮ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕಾಂಕೆ.ವಿ. ಶ್ರೀಧರನ್ - ಮ್ಯುಚುಯಲ್ ಫಂಡ್ ಗಳ ವ್ಯಾಪಾರದಲ್ಲಿ ಇಲಾಖೆಯ ಘನತೆಗೆ ಮುಕ್ಕು ಬಂದಿದೆ. ಜನರು ನಮ್ಮ ಇಲಾಖೆಯ ಮೇಲಿರಿಸಿದ ವಿಶ್ವಾಸವನ್ನು ದುರುಪಯೋಗವಾದಂತಾಗಿದೆ ಎಂದಿದ್ದರು. ಅದರ ಬೆನ್ನಿಗೆ ಆಘಾತಕಾರಿಯಾದ ಸುದ್ದಿಯೊಂದು ಬಂದಿದೆ.
ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ಸಬ್ ಡಿವಿಜನ್ನಿನ ನಂದಿ ಅಂಚೆ ಕಚೇರಿಯ ಚಿತ್ತೆನಹಳ್ಳಿ ಬಿ ಓ ವ್ಯಾಪ್ತಿಯಲ್ಲಿ ಸ್ಥಳೀಯ ಹಳ್ಳಿಯ ಜನರು ಆಗಿನ ವಿಭಾಗಿಯ ಆಡಳಿತವು ಹೇಳಿದಂತೆ ಯು, ಟಿ,ಐ ಅಡ್ವ೦ಟೆಜ ಫಂಡ್ ನಲ್ಲಿ ತೊಡಗಿಸಿದ ಹಣವು ಮೂರು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚ್ಚಾಗಿಲ್ಲವೆಂದು ದೂರಿ ಮೇಲ ಓವರ್ಸೀರ್, ಹಾಗು ಅಂಚೆ ನೀರಿಕ್ಷಕರನ್ನು ಘೆರಾವ್ ಮಾಡಿ ಹಿಡಿದಿತ್ತುಕೊಂಡಿದ್ದರು. ಪ್ರಸ್ತುತ ವಿಭಾಗೀಯ ಆಡಳಿತವು ಇವರ ಬಿಡುಗಡೆಗೆ ಯಾವುದೇ ಆಸಕ್ತಿಯನ್ನು ತೋರಲಿಲ್ಲವಂತೆ.
ನಂತರದಲ್ಲಿ ಅಂಚೆ ನಿರೀಕ್ಷಕರ ವಲಯ ಕಾರ್ಯದರ್ಶಿ ಶ್ರೀ ನವೀನ ಚಂದ್ರ ಮತ್ತು ಡಿಪಿಎಸ್ ಶ್ರೀ ಶರವಣನ್ ರವರು ಚಿಕ್ಕಬಳ್ಳಾಪುರ ಅಂಚೆ ನಿರೀಕ್ಷಿಕರೊಂದಿಗೆ ಮಾತನಾಡಿ ನಂತರ ಪೋಲಿಸ್ ಅಧಿಕಾರಿಗಳ ಮಧ್ಯ ಪ್ರವೇಶದ ನಂತರ ಅವರುಗಳನ್ನು ಬಿಡಿಸಲಾಯಿತಂತೆ. ಇಂದು ಚಿಕ್ಕಬಳ್ಳಾಪುರದಲ್ಲಿ ಆದದ್ದು ನಾಳೆ ಎಲ್ಲಾ ಕಡೆಯೂ ಆಗಬಹುದು. ನೌಕರ ಬಂದುಗಳೇ ಎಚ್ಚರ! ಯಾರೋ ಮಾಡಿದ್ದು ಯಾರಿಗೋ ಉರಳು
No comments:
Post a Comment