Translate

OUR VISITER ON DATE

Thursday, June 10, 2010

ಅಂಚೆ ಕಾರ್ಡ್ ಚಳುವಳಿ

ಈಗಾಗಲೇ ಜೂನ್ ೪ ರಂದೇ ಅಂಚೆ ಜಂಟಿ ಕ್ರಿಯಾ ಸಮಿತಿಯು ಇಲಾಖೆಗೆ ನೋಟಿಸೊಂದನ್ನು ನೀಡಿದ್ದು ಅಂಚೆ ಇಲಾಖೆಯ ಎಲ್ಲಾ ನೌಕರರು ದಿನಾಂಕ ೧೩ನೆಯ ಜುಲೈನಿಂದ "ಅನಿರ್ಧಿಷ್ಟಾವಧಿ ಮುಷ್ಕರ" ದ ಮೇಲೆ ತೆರಳುವರು ಎಂದು ತೀರ್ಮಾನಿಸಲಾಗಿದೆ. ಇ ಸಂಬಂಧವಾಗಿ ಅನೇಕ ಹೋರಾಟದ ಹಾದಿಯನ್ನು ಈಗಾಗಲೇ ಹಾಕಿಕೊಳ್ಳಲಾಗಿದೆ. ಅದರಂತೆ ದಿನಾಂಕ ೪-೬-೧೦ ರಂದು (ಮುಷ್ಕರದ ನೋಟಿಸು ಸಲ್ಲಿಸುವ ದಿನದಂದು ) "ಪ್ರತಿಭಟನಾ ದಿನ" ವನ್ನಾಗಿ ಆಚರಿಸಲಾಯಿತು.
ಎರಡನೇ ಹಂತದ ಕಾರ್ಯಕ್ರಮವಾಗಿ ದಿನಾಂಕ ೦೮.೦೬.೨೦೧೦ ರಿಂದ ೧೫.೦೬.೨೦೧೦ ರ ವರೆಗೆ ದೇಶದ ಎಲ್ಲಾ ಅಂಚೆ ನೌಕರರಿಂದ ಅಂಚೆ ಕಾರ್ಡ್ ಚಳುವಳಿಯನ್ನು ಆಚರಿಸಲು ಕರೆ ನೀಡಲಾಗಿದೆ. ಈ ಅಂಚೆ ಕಾರ್ಡನ್ನು ಕೇಂದ್ರ ಸಂಪರ್ಕ ಸಚಿವರಾದ ಶ್ರೀ ಎ . ರಾಜ ರವರಿಗೆ ಕಳುಹಿಸಲು ಕೋರಿದೆ. ಪ್ರತಿಯೊಬ್ಬ ಸೌಕರರು ಈ ಕೆಳಕಾಣಿಸಿದ ರೀತಿಯಲ್ಲಿ ಅಂಚೆ ಕಾರ್ಡ್ ಬರೆದು ಕಳುಹಿಸಿ.
ಮಾದರಿ ಪತ್ರ ಈ ರೀತಿ ಇದೆ.
To

Shri.A.Raja
Honourable MOC & IT
Government of India
Electronic Nikethan
CGO Complex
Lodi Road, New Delhi - 110003

Respected Sir,

POSTAL EMPLOYEES REQUEST YOUR KIND INTERVENTION TO DIRECT THE POSTAL BOARD TO DISCUSS THE CHARTER OF DEMANDS OF POSTAL JOINT COUNCIL OF ACTION FOR REACHING SETTLEMENT OF OUR JUSTIFIED ISSUES.

Thanking You Sir,

Name:
Designation:
Office:
Date:
Yours faithfully,

ಮೂರನೇ ಹಂತದ ಕಾರ್ಯಕ್ರಮವಾಗಿ ಜೂನ್ ೨೯ ರಂದು ಕಪ್ಪು ಬ್ಯಾಡ್ಜ್ ದರಿಸಿ ಕೆಲಸವನ್ನು ಮಾಡುವುದು ಈ ಸಂದರ್ಭದಲ್ಲಿ ಸ್ಥಳೀಯ ಲೋಕಸಭಾ ಸದಸ್ಯರನ್ನು , ವಿದಾನ ಸಭಾ ಸದಸ್ಯರನ್ನು ಕಂಡು ಬೇಟಿಮಾಡಿ ನಮ್ಮ ಬೇಡಿಕೆಗಳ ಬಗ್ಗೆ ಅವರ ಗಮನವನ್ನು ಸೆಳೆದು ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಲು ಆಗ್ರಹಿಸುವುದು.
ನಾಲ್ಕನೆಯ ಹಂತವಾಗಿ ಜುಲೈ ೫ ದಿಂದ ಜುಲೈ ೯ ರ ವರೆಗೆ ಅಸಹಕಾರ ಚಳುವಳಿಯನ್ನು ನಡೆಸುವುದು. ಇದರಂತೆ ಇಲಾಖೆಯ ಕಾನೂನಿನಂತೆ ಮಾತ್ರ ಕೆಲಸವನ್ನು ಮಾಡುವುದು. ನೌಕರರ ಸಹಕಾರವಿಲ್ಲದೆ ಇಲಾಖೆ ಹೇಗೆ ನಡೆದೀತು ಎಂಬುದು ಇಲಾಖೆಯ ವರಿಷ್ಟರಿಗೂ ತಿಳಿಯಬೇಕು ಎಂಬುದೇ ಈ ಚಳುವಳಿಯ ಉದ್ದೇಶ.
ನಂತರ ಅಂತಿಮವಾಗಿ ದಿನಾಂಕ ೧೩ ಜುಲೈ ನಿಂದ " ಅನಿರ್ಧಿಷ್ಟಾವಧಿ ಮುಷ್ಕರ" ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಮೇಲ್ಕಾಣಿಸಿದ ಎಲ್ಲಾ ಕಾರ್ಯಕ್ರಮವನ್ನು ಎಲ್ಲಾ ನೌಕರರೂ ತಪ್ಪದೆ ಆಚರಿಸಬೇಕು.
ಅಂತಿಮ ಜಯ ನಮ್ಮದೇ. ಮರೆಯದಿರಿ.



ಜಿ.ಡಿ.ಎಸ ನೌಕರರಿಗೆ ೬೦% ವೇತನ ಬಾಕಿ ಪಾವತಿ

ನಟರಾಜ ಮೂರ್ತಿ ಸಮಿತಿಯ ವರದಿಯ ಅನುಷ್ಟಾನದ ಅನ್ವಯ ಜಿಡಿಎಸ್ ನೌಕರರಿಗೆ ಈಗಾಗಲೇ ೪೦% ವೇತನದ ಬಾಕಿ ಪಾವತಿಯಾಗಿತ್ತು. ಇದೀಗ ಬಾಕಿ ಉಳಿದ ೬೦% ವೇತನದ ಬಾಕಿ ಪಾವತಿಗೆ ಸರ್ಕಾರದ ಆದೇಶ ಬಿಡುಗಡೆಯಾಗಿದೆ. ವೇತನದ ಪಾವತಿಯನ್ನು ಶೀಘ್ರವಾಗಿ ಪಾವತಿಸಲು ಆದೇಶಿಸಲಾಗಿದೆ.