

ಪೋಸ್ಟ್ ಮ್ಯಾನ್ ಮತ್ತು ಮಲ್ಟಿ ಸ್ಕಿಲ್ಲಡ್ ಗ್ರೂಪ್ ಡಿ ಗಳಿಗಾಗಿ ಹೊಸ ಸಮ ವಸ್ತ್ರದ ವಿನ್ಯಾಸ ಪ್ರಕಟಿಸಲಾಗಿದೆ. ಹೊಸ ಸಮವಸ್ತ್ರವನ್ನು ಈ ಬಾರಿ ಖಾಕಿ ಬಣ್ಣದಲ್ಲಿ ನೀಡಲಾಗುವುದು. ಸಮವಸ್ತ್ರದ ಚಿತ್ರವನ್ನು ಈ ಮೇಲೆ ನೀಡಲಾಗಿದೆ. ಅಂಗಿಯಲ್ಲಿ (ತುಂಬು ತೋಳಿನದ್ದು ಅಥವಾ ಅರ್ಧ ತೋಳಿನದ್ದು ) ಎರಡು ಜೇಬನ್ನು , ಜೊತೆಗೆ 14 x 7 ರ ಅಳತೆಯ ಭಾರತಿಯ ಅಂಚೆಯ ಲೋಗೋ ವನ್ನು ಹೊಲಿಸಬೇಕಾಗುತ್ತದೆ. ಕಪ್ಪು ಪ್ಲಾಸ್ಟಿಕ್ ಹೆಸರು ಪಲಕದಲ್ಲಿ ಬಿಳಿ ಅಕ್ಷರದಲ್ಲಿ ನೌಕರರ ಹೆಸರನ್ನು ಇಂಗ್ಲಿಷ್ ಹಾಗು ಸ್ತಳೀಯ ಭಾಷೆಯಲ್ಲಿ ಬರೆಸಿ ಅಂಗಿಯ ಮೇಲೆ ಹಾಕಿಕೊಳ್ಳಬೇಕಾಗುತ್ತದೆ. ಮಹಿಳಾ ನೌಕರರಿಗೆ ಖಾಕಿ ಬಣ್ಣದ ರವಿಕೆ, ಸೀರೆ/ ಸೆಲ್ವಾರ್ ಕಮೀಜ್ ಜೊತೆಗೆ ಖಾಕಿ ದುಪ್ಪಟ ನೀಡಲಾಗುವುದು. ಆದೇಶ ಈಗಾಗಲೇ ಹೊರಬಿದ್ದಿದ್ದು ಶೀಘ್ರದಲ್ಲಿ ಹೊಸ ಸಮವಸ್ತ್ರದ ವಿತರಣೆ ಆಗಲಿದೆ.
No comments:
Post a Comment