Translate

OUR VISITER ON DATE

Wednesday, April 21, 2010

ಅಂಚೆ ಇಲಾಖೆಗೆ ಪ್ರಶಸ್ತಿ

ಅಂಚೆ ವಿತರಣೆ, ಹಣ ಸಂದಾಯ, ಸೇವಿಂಗ್ಸ್ ಬ್ಯಾಂಕ್ ಕಾರ್ಯಾಚರಣೆಯನ್ನು ಸುಧಾರಿಸಿ ಅಂಚೆ ಕಛೇರಿಗಳ ರೂಪ-ಲಕ್ಷಣಗಳನ್ನು ಹಾಗೂ ಅನುಭವಗಳನ್ನು ಉತ್ತಮಗೊಳಿಸಲಿಕ್ಕಾಗಿ ಭಾರತೀಯ ಅಂಚೆಯು ೨೦೦೮ ರ ಮೇ ತಿಂಗಳಲ್ಲಿ " ಪ್ರಾಜೆಕ್ಟ್ ಆರೋ" ಅಂದ್ರೆ ಶರವೇಗಿ ಯೋಜನೆಯನ್ನು ದೇಶಾದ್ಯಂತ ೧೦೫೦ ಅಂಚೆ ಕಚೇರಿಗಳಲ್ಲಿ ಕಾರ್ಯಗತಗೊಳಿಸಿತು. " ಪ್ರಾಜೆಕ್ಟ್ ಆರೋ" ಅನುಷ್ಠಾನ ದಿಂದ ಶಕ್ತ ಮತ್ತು ಜವಾಬ್ದಾರಿಯುತ ಸಂಸ್ಥೆ ಯಾಗಿ ಹೊರಹೊಮ್ಮಿದ ನಮ್ಮ ಭಾರತೀಯ ಅಂಚೆ ಇಲಾಖೆಗೆ "ಸಾರ್ವಜನಿಕ ವಲಯದಲ್ಲಿ ಸರ್ವೋತ್ತಮ ಆಡಳಿತಕ್ಕಾಗಿ (೨೦೦೮-೦೯) ನೀಡುವ ಪ್ರಧಾನ ಮಂತ್ರಿಗಳ ಪುರಸ್ಕಾರ ದೊರತಿದೆ. " ಪ್ರಾಜೆಕ್ಟ್ ಆರೋ"ಸಂದರ್ಭದಲ್ಲಿ ತಮ್ಮ ನೋವನ್ನು ಮರೆತು ಕೆಲಸದಲ್ಲಿ ತೊಡಗಿಕೊಂಡು ಈ ಪ್ರಶಸ್ತಿ ಇಲಾಖೆಗೆ ಬರಲು ಕಾರಣರಾದ ಎಲ್ಲ ನೌಕರ ಬಂಧುಗಳಿಗೆ ಈ ಪ್ರಶಸ್ತಿ ಸಲ್ಲುತ್ತದೆ. ಇನ್ನಾದರು ಇಲಾಖೆಯು ನೌಕರರ ಕಷ್ಟಗಳಿಗೆ ಸ್ಪಂದಿಸಿ ಅದರಲ್ಲೂ ಅತ್ಯಂತ ಕೆಳವರ್ಗದ ನೌಕರರಾದ ಗ್ರೂಪ್ ಡಿ, ಇಲಾಖೆತರರ ನೌಕರರ ಅತಿ ಪ್ರಮುಖ ಬೇಡಿಕೆಗಳನ್ನು ಮನ್ನಿಸಿದಲ್ಲಿ ಮುಂಬರುವ ವರ್ಷಗಳಲ್ಲಿ ಇಲಾಖೆಗೆ ಇನ್ನು ಹೆಚ್ಚಿನ ಪ್ರಶಸ್ತಿ, ಕೀರ್ತಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಪ್ರಶಸ್ತಿಗೆ ಕಾರಣರಾದ ಎಲ್ಲ ನೌಕರ ಬಂಧುಗಳಿಗೆ ಮತ್ತೊಮ್ಮೆ ಶುಭಾಶಯಗಳು.

No comments:

Post a Comment