ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು .
ನಮ್ಮೆಲ್ಲಾ ಸದಸ್ಯರುಗಳಿಗೆ ಒಂದು ಅಪೂರ್ವ ಅವಕಾಶ. ಶಿವಮೊಗ್ಗ ನಗರದ ಸಾಗರ ರಸ್ತೆಯ ಪೆಸಿಟ್ ಕಾಲೇಜ್ ಬಳಿ ಶಕ್ತಿ ಇನ್ಫ್ರಾ ಡೆವಲಪರ್ಸ್ ಸಂಸ್ಥೆ ಯಿಂದ ಈಗಾಗಲೇ ಶಕ್ತಿದಾಮ ಎಂಬ ಹೆಸರಿನಲ್ಲಿ ಹೊಸ ಲೇ ಔಟ್ ಒಂದನ್ನು ರಚಿಸುತ್ತಿದ್ದಾರೆ. ಈ ಲೇ ಔಟ್ ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ನಂತರದಲ್ಲಿ ಮತ್ತು ಪೋಲಿಸ್ ಲೇ ಔಟ್ ಗಿಂತ ಮುಂಚಿತವಾಗಿ ಪೆಸಿಟ್ ಕಾಲೇಜ್ ಮುಂಬಾಗದಲ್ಲಿ ಬರಲಿದೆ. ಇಲ್ಲಿ ಈಗಾಗಲೇ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಂಘಕ್ಕಾಗಿ 700 ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಬ್ಯಾಂಕ್ ನೌಕರರಿಗಾಗಿ ಅವರ ಸಂಘದಿಂದ 175 ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ. ಈ ಹಂತದಲ್ಲಿ ನಮ್ಮ ಸಂಘದ ಸದಸ್ಯರಿಗೂ ಒಂದು ನಿವೇಶನಕ್ಕಾಗಿ ಪ್ರಸ್ತಾಪ ಬಂದಿದ್ದರಿಂದ ನಾವು ಅವರನ್ನು ಸಂಪರ್ಕಿಸಿದ್ದೇವೆ. ಈಗಾಗಲೇ ಇಲ್ಲಿ ಒಂದು ಚದರಅಡಿಗೆ 449/-ರು ಗಳಂತೆ ಶಕ್ತಿ ಇನ್ಫ್ರಾ ಡೆವಲಪರ್ಸ್ ಮಾರಾಟ ಮಾಡುತ್ತಿದ್ದು. ಇದೇ ದಿನಾಂಕ 15.11.2012ರ ನಂತರ ರೂ. 499/- ಕ್ಕೆ ಚದರ ಅಡಿ ಯಂತೆ ನಿವೇಶನಗಳ ಮಾರಾಟ ಮಾಡಲಾಗುತ್ತಿದೆ. ನಮ್ಮ ಸಂಘದ ಸದಸ್ಯರಿಗಾಗಿ ವಿಶೇಷವಾಗಿ ಮನವಿ ಮಾಡಿಕೊಂಡ ನಂತರ ಇದೀಗ ರು.415/- ರೂ ಚದರ ಅಡಿ ಲೆಕ್ಕದಲ್ಲಿ ನಿವೇಶನ ನೀಡಲು ಸಂಬಂಧಪಟ್ಟವರು ಒಪ್ಪಿ ಕೊಂಡಿದ್ದು ಹಣ ತುಂಬಲು ಕಾಲಾವಕಾಶ ಸಹ ನೀಡಲಾಗುವುದು. ಪ್ರಥಮ ಕಂತನ್ನು ದಿನಾಂಕ 15.12.2012ರ ಒಳಗಾಗಿ ನೀಡಬೇಕು. ( ಈ ಕೆಳಗೆ ಟೇಬಲ್ ನಲ್ಲಿ ವಿವರ ನೀಡಲಾಗಿದೆ.)
ಸೂಚನೆಗಳು;
ನಿವೇಶನದ ಬೆಲೆ ಪ್ರತಿ ಚದರ ಅಡಿಗೆ 415/- ರೂ ಮಾತ್ರ.
ನಿವೇಶನ ನಿರ್ಮಿಸಲು ಕಾಲಾವಧಿ 1 ವರ್ಷ ಅಂದಾಜು.
ನಿವೇಶನವನ್ನು ಭೂ ಪರಿವರ್ತನೆ ಮಾಡಿಸಿ ನಗರಾಭಿವೃದ್ದಿ ಪ್ರಾಧಿಕಾರದ ನಿಯಮಗಳಂತೆ ಅಭಿವೃದ್ದಿ ಪಡಿಸಲಾಗುತ್ತದೆ. ನಿವೇಶನಕ್ಕಾಗಿ ಹಣ ತುಂಬಲು 3 ಕಂತು ಮಾತ್ರ ನೀಡಲಾಗುವುದು.
ಮೊದಲು ಬಂದವರಿಗೆ ಮೊದಲ ಆದ್ಯತೆ ಅನುಸಾರವಾಗಿ ನಿವೇಶನ ವಿತರಣೆ ಮಾಡಲಾಗುವುದು.
ನಿವೇಶನ ಪಡೆಯಲಿಚ್ಚಿಸುವವರು ಕಾಂ. ರಾಘವೇಂದ್ರ ಹವಲೆರ್, ಪೋಸ್ಟಲ್ ಅಸಿಸ್ಟಂಟ್ , ಶಿವಮೊಗ್ಗ ಮೊ 9620455929 ಮತ್ತು ಕಾಂ.ಟಿ. ಕೆ. ಗೋಪಾಲ್, ಪೋಸ್ಟಲ್ ಅಸಿಸ್ಟಂಟ್ , ಶಿವಮೊಗ್ಗ, 9448871490, ಇವ್ರುಗಳನ್ನಾಗಲಿ ಅಥವಾ ಕಾಂ.ಪ್ರಕಾಶ್ ರಾವ್ , 9448844342 ಇವರನ್ನಾಗಲೀ ಸಂಪರ್ಕಿಸಬಹುದು.
ಹಣವನ್ನು ಡಿಡಿ ಅಥವಾ ಲೋಕಲ್ ಚಕ್ ಮೂಲಕ ಪಾವತಿಸಬಹುದು.
ನಿವೇಶನದ ಸೊಂದಣಿ ಶುಲ್ಕವನ್ನು ನಿವೇಶನ ಪಡೆದ ಸದಸ್ಯರೇ ತುಂಬಿಸಬೇಕು.
ಬಡಾವಣೆಯ ಸೌಲಭ್ಯಗಳು :
1. ಬಡಾವಣೆಯ ಮಧ್ಯದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ.
2. ಒಂದೇ ಸಮಾನ ಮನಸ್ಕ ಕುಟುಂಬಗಳು ಒಟ್ಟಿಗೆ ವಾಸಿಸುವ ಸುವರ್ಣಾವಕಾಶ .
3. ನಗರಾಭಿವೃದ್ದಿ ಪ್ರಾಧಿಕಾರದಿಂದ ಬಡಾವಣೆ ನಕ್ಷೆಗೆ ಅನುಮೋದನೆ.
4.ಅನುಮೋದಿತ ನಕ್ಷೆಯ ಪ್ರಕಾರ ಉತ್ಕೃಷ್ಟ ಡಾಂಬರೀಕರಣದ ರಸ್ತೆಗಳು.
5. ಇಡೀ ಬಡಾವಣೆಗೆ ಬೃಹತ್ ಓವರ್ ಹೆಡ್ ಟ್ಯಾಂಕ್ ಮತ್ತು ಅತ್ಯುತ್ತಮ ನೀರಿನ ವ್ಯವಸ್ಥೆ.
6. ವಿದ್ಯುತ್ ಸಂಪರ್ಕ ಕಲ್ಪಿಸಿ, ಬೀದಿ ದೀಪಗಳ ಅಳವಡಿಕೆ ಮತ್ತು ಸಾಲುಮರಗಳ ವ್ಯವಸ್ಥೆ.
7. ಪ್ರತಿ ನಿವೇಶನಕ್ಕೆ ಪ್ರತ್ಯೇಕ ನೀರಿನ ಸಂಪರ್ಕ.
8. ಅತ್ಯತ್ತಮ ಒಳಚರಂಡಿ ವ್ಯವಸ್ಥೆ ಹಾಗು ಸೆಪ್ಟಿಕ್ ಟ್ಯಾಂಕ್ ನಿರ್ಮಾಣ.
9. ಅನುಮೋದಿತ ನಕ್ಷೆ ಪ್ರಕಾರ ಉದ್ಯಾನವನ, ಆಟದ ಮೈದಾನ ಇತ್ಯಾದಿ ನಾಗರಿಕ ಸೌಲಭ್ಯಗಳಿಗೆಂದೆ ಸಿ.ಎ ನಿವೇಶನ ಕಾಯ್ದಿರಿಸುವಿಕೆ.
10.ಬಿ.ಹೆಚ್ ರಸ್ತೆಯಿಂದ ಬಡಾವಣೆಯ ಕೊನೆಯವರೆವಿಗೆ 100 ಅಡಿ ರಸ್ತೆಯ ಸಂಪರ್ಕ.
11. ಬಡಾವಣೆಯ ಮಧ್ಯದಲ್ಲಿ ಅಗತ್ಯಕ್ಕೆ ತಕ್ಕಂತೆ 30, 40, ಮತ್ತು 60 ಅಡಿಗಳ ರಸ್ತೆ ಸಂಪರ್ಕ.
12. ಬಡಾವಣೆಯಲ್ಲಿ ಅತ್ಯುತ್ತಮ ಪಾರ್ಕ್ ವ್ಯವಸ್ಥೆ.
13.ಬಡಾವಣೆಯಲ್ಲಿ ಈಗಾಗಲೇ 3 ಕೆರೆಗಳಿವೆ.
ಈ ಬಡಾವಣೆ ನಿರ್ಮಿಸುವವರು ಈಗಾಗಲೇ ಹೇಳಿದಂತೆ " ಶಕ್ತಿ ಇನ್ಫ್ರಾ ಡೆವಲಪರ್ಸ್, ಏಕದಂತ ಬಿಲ್ದಿಂಗ್ಸ್, 100 ಅಡಿ ಮುಖ್ಯ ರಸ್ತೆ, ಶಿವಾಲಯದ ಹಿಂಬಾಗ, ವಿನೋಬನಗರ, ಶಿವಮೊಗ್ಗ 577204.
ಹೆಚ್ಚಿನ ವಿವರಗಳನ್ನು ಈಗಾಗಲೇ ಮೇಲೆ ಹೇಳಿದವರನ್ನು ಸಂಪರ್ಕಿಸಿ. ಈ ಯೋಜನೆ ನಮ್ಮ ಸಂಘದ ಸದಸ್ಯರಿಗೆ ಮಾತ್ರ, ನಮ್ಮ ಸಂಘ ಕೇವಲ ನಮ್ಮ ಸದಸ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾತ್ರ ಈ ಕಾರ್ಯಕ್ಕೆ ಕೈ ಹಾಕಿದೆ. ಇದರಲ್ಲಿ ನಮ್ಮ ಸದಸ್ಯರನ್ನು ಶಕ್ತಿ ಇನ್ಫ್ರಾ ಡೆವಲಪರ್ಸ್ ನೇರವಾಗಿ ಪರಿಚಯಿಸಲಾಗುವುದು. ಇದರಲ್ಲಿ ಸಂಘಟನೆಯ ಯಾವುದೇ ವೈಯಕ್ತಿಕ ಜವಾಬ್ದಾರಿ ಇರುವುದಿಲ್ಲ
Dimension of sites |
30
40
|
30,
50
|
40,
60
|
ಹಣ ಪಾವತಿಸುವ ದಿನಾಂಕ
|
1 ನೆ ಕಂತು
|
1,75,000.00
|
2,18,000.00
|
3,49,000.00
|
15.12.2012
|
ಎರಡನೇ ಕಂತು
|
1,75,000.00
|
2,18,000.00
|
3,49,000.00
|
15.03.2013
|
ಕೊನೆ ಕಂತು
|
1,48,000.00
|
1,86,500.00
|
2,98,000.00
|
ನೋಂದಣಿ ಸಮಯದಲ್ಲಿ
|
ನಿವೇಶನದ ಒಟ್ಟು ಮೊತ್ತ
|
4,98,000.00
|
6,22,500.00
|
9,96,000.00
|
ಅಂದಾಜು 1 ವರ್ಷ
|
No comments:
Post a Comment