Translate

OUR VISITER ON DATE

Friday, August 19, 2011

ಅಣ್ಣನ ಹೋರಾಟಕ್ಕೆ ಪ್ರಾಮಾಣಿಕ ನೌಕರರ ಬೆಂಬಲ



ಅಂದು ಮಹಾತ್ಮ ಗಾಂಧೀಜಿ ದೇಶದ ಸ್ವಾತಂತ್ರಕ್ಕಾಗಿ ಅಹಿಂಸಾತ್ಮಕವಾಗಿ ಹೋರಾಡಿ ದೇಶಕ್ಕೆ ಸ್ವಾತಂತ್ರ ಗಳಿಸಿಕೊಟ್ಟರು. ಆದರೆ ಇಂದು ಅ ಮಹಾತ್ಮನ ಕನಸು ನುಚ್ಚು ನೂರಾಗಿದೆ. ದೇಶದ ತುಂಬೆಲ್ಲ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಮರ್ಥ ಜನ ಲೋಕಪಾಲ್ ಬಿಲ್ಲನ್ನು ಮಂಡಿಸಲು ಗಾಂಧಿವಾದಿ ಅಣ್ಣ ಹಜಾರೆ ಮಾಡಿದ ಉಪವಾಸಕ್ಕೆ ಕೇಂದ್ರ ಸರ್ಕಾರ ತನ್ನದೇ ಲೋಕ ಪಾಲ್ ಬಿಲ್ಲನ್ನು ತಂದು ಅದನ್ನು ಸಂಸತ್ತಿನಲ್ಲಿರಿಸಿದೆ. ಇದಕ್ಕೆ ಕೇವಲ ಆಡಳಿತ ಪಕ್ಷ ಮಾತ್ರ ಕಾರಣವಲ್ಲ. ಎಲ್ಲ ರಾಜಕೀಯ ಪಕ್ಷಗಳದ್ದು ಪಾಲಿದೆ. ಸರ್ವ ಪಕ್ಷ ಸಭೆಯಲ್ಲಿ ಎಲ್ಲ ಪಕ್ಷಗಳೂ ನಿರ್ದಾರಕ್ಕೆ ಬಾರದೆ ಹೋದವು. ಅದಕ್ಕಾಗಿ ಅಣ್ಣ ಮತ್ತೊಮ್ಮೆ ಉಪವಾಸಕ್ಕೆ ಕುಳಿತಿದ್ದಾರೆ. ಅಷ್ಟಕ್ಕೇ ಹೆದರಿದ ಸರ್ಕಾರ ಅಂದು ನೌಕರರ ಮುಷ್ಕರದ ಹಕ್ಕನ್ನು ಕಸಿದಂತೆ ಇಂದು ಅಣ್ಣನನ್ನು ಬಂದಿಸಿದೆ. ಇದರಿಂದ ಈ ಹಿಂದಿನ ಬ್ರಿಟಿಷ್ ಆಡಳಿತಕ್ಕಿಂತ ಕೆಟ್ಟದಾಗಿ ಕೇಂದ್ರ ಸರ್ಕಾರ ನಡೆದುಕೊಂಡಿದೆ. ಇಡೀ ದೇಶಕ್ಕೇ ದೇಶವೇ ಇಂದು ಅಣ್ಣ ಪರವಾಗಿ ನಿಂತಿದ್ದರ ಪಲವಾಗಿ ಒಂದು ರೀತಿ ಭೃಷ್ಟಾಚಾರದ ವಿರುದ್ದವಾಗಿ ಮತ್ತೊಂದು ಸ್ವತಂತ್ರ ಹೋರಾಟ ರೂಪು ಗೊಂಡಿದೆ.


ಈ ಹಂತದಲ್ಲಿ ದೇಶದಲ್ಲಿ ಪ್ರಾಮಾಣಿಕ ನೌಕರನೆಂಬ ಹಣೆಪಟ್ಟಿ ಹೊಂದಿರುವ ಏಕೈಕ ಸಂಸ್ಥೆ /ಇಲಾಖೆಯಾದ ಅಂಚೆ ನೌಕರರ ಪಾಲು ಇರಬೇಡವೇ? ಹಾಗಾಗಿ ಏಳಿ , ಎದ್ದೇಳಿ ಅಂಚೆ ನೌಕರರೆ, ಅಣ್ಣನ ಹೋರಾಟಕ್ಕೆ ಕೈ ಜೋಡಿಸಿ. ಪ್ರಾಮಾಣಿಕ, ಭೃಷ್ಟಾಚಾರ ಮುಕ್ತ ಭಾರತಕ್ಕೆ ಪ್ರತಿಜ್ಞೆಮಾಡಿ. ಹೋರಾಟ ನಮಗೇನು ಹೊಸತಲ್ಲ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಾಡುವ ಹೋರಾಟಕ್ಕಿಂತಲೂ ದೇಶಕ್ಕಾಗಿ ನಡೆಸುವ ಈ ಹೋರಾಟ ಮುಖ್ಯ. ಅಣ್ಣನ ಹೋರಾಟಕ್ಕೆ ಜಯವಾಗಲಿ. ಭೃಷ್ಟಾಚಾರ ಮುಕ್ತ ಭಾರತ ನಮ್ಮ ಉಸಿರಾಗಲಿ.



No comments:

Post a Comment