Saturday, May 29, 2010
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ
ಆರನೇ ವೇತನ ಆಯೋಗದ ವರದಿಯ ನಂತರ ಓವರ್ ಟೈಮ್ ಭತ್ಯೆಯ ಹೆಚ್ಚಳ ವಾಗಬೇಕಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಇನ್ನು ಯಾವುದೇ ನಿರ್ದಾರ ತೆಗೆದುಕೊಂಡಿಲ್ಲ. ಆದರೆ ಹಿಂಬಾಗಿಲಿಂದ ರೈಲ್ವೆ ಇಲ್ಲಖೆಗೆ ಮಾತ್ರ ಈ ಭತ್ಯಯ ಹೆಚ್ಚಳವನ್ನು ಮಾಡಲಾಗಿದೆ. ಐದನೇ ವೇತನ ಆಯೋಗದ ವರದಿಯ ನಂತರ ಈ ವಿಚಾರದ ಬಗ್ಗೆ ಆಡಳಿತ ನ್ಯಾಯ ಪಂಚಾಯ್ತಿಯ ತೀರ್ಮಾನವನ್ನೇ ಸರ್ಕಾರವು ಒಪ್ಪದೇ ಇದ್ದು ಇದೀಗ ರೈಲ್ವೆ ಇಲಾಖೆಗೆ ಮಾತ್ರ ಓವರ್ ಟೈಮ್ ಭತ್ಯೆಯ ಹೆಚ್ಚಳವನ್ನು ಒಪ್ಪಿದ್ದು ಕೇಂದ್ರ ಸರ್ಕಾರಿ ನೌಕರರಲ್ಲಿ ಒಡಕನ್ನು ತರುವ ಪ್ರಯತ್ನವಾಗಿದೆ. ಈ ಬಗ್ಗೆ ಎನ್.ಎಫ್,ಪಿ,ಇ ಯು ತೀವ್ರವಾಗಿ ಪ್ರತಿಭಟಿಸಿದೆ. ಈ ಹಿಂದೆ ಬೋನಸ್ ನೀಡುವ ಮಿತಿಯಲ್ಲೂ ಕೂಡ ಬೇರೆ ಇಲಾಖೆ ನೌಕರರಿಗೆ ಒಂದು ನೀತಿ ರೈಲ್ವೆ ಇಲಾಖೆ ನೌಕರರಿಗೆ ಒಂದು ನೀತಿ ಅನುಸರಿಸಿದ್ದು ಸತತ ಹೋರಾಟದ ಮೂಲಕ ಅದನ್ನು ಸರಿಪದಿಸಲಾಗಿತ್ತು. ಇದೀಗ ಮತ್ತೊಮ್ಮೆ ಅಂತಹುದೇ ಪ್ರಯತ್ನ ಆಗಬೇಕಿದೆ.
Subscribe to:
Post Comments (Atom)
No comments:
Post a Comment