ಇತ್ತೀಚಿಗೆ ಅಂದರೆ ೧೫.೦೭.೨೦೧೧ ರಂದು ಹಾವೇರಿ ವಿಭಾಗದ ಮಾಸಿಕ ಸಭೆ ನಡೆಯುತ್ತಿತ್ತು. ಸಭೆ ಪ್ರಾರಂಭವಾದ ಅರ್ಧ ಘಂಟೆಯೊಳಗಾಗಿ ಅಂಚೆ ಅಧೀಕ್ಷಕರಾದ ಶ್ರೀ ಶಿವರಾಜ ರವರು ತಾವು ತಮ್ಮ ಇಚ್ಚೆಗನುಗುಣವಾಗಿ ಸಭೆ ನಡೆಸುವುದಾಗಿಯೂ ಮತ್ತು ಸಭೆಗೆ ಬಂದಿದ್ದ ಸಂಘದ ಮುಖಂಡರುಗಳಿಗೆ ಅನುಚಿತವಾದ ಪದ ಪ್ರಯೋಗ ಮಾಡಿದರು. ಇದರಿಂದ ಕೆರಳಿದ ಎಲ್ಲ ನೌಕರರು ತೀವ್ರವಾಗಿ ಪ್ರತಿಭಟಿಸಿದರು. ಮಾಸಿಕ ಸಭೆಯನ್ನು ಬಾಯ್ಕಾಟ್ ಮಾಡಲಾಯಿತು. ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರವರಿಗೆ ತಂತಿ ಕಳುಹಿಸಲಾಯಿತು.
ಈ ಪ್ರತಿಭಟನೆಗೆ ವಿಭಾಗದ ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ನೌಕರರಿಂದ ಮೂಡಿಬಂತು. ಹಾವೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಸತತ ಎರಡು ಘಂಟೆಗಳ ಪ್ರತಿಭಟನೆ ನಂತರ ನೌಕರರ ಶಕ್ತಿಗೆ ಅಧಿಕಾರಿವರ್ಗ ಮಣಿಯಲೇ ಬೇಕಾಯ್ತು. ಅಂಚೆ ಅಧೀಕ್ಷಕರು ಸಾರ್ವಜನಿಕರೆದುರು, ಮಾಧ್ಯಮ (ಈ ಟಿವಿ, ಉದಯ ಟಿ.ವಿ., ಟಿ.ವಿ ೯ ) ದೆದುರು ತನ್ನ ಕ್ಷಮೆ ಯಾಚಿಸಿದರು. ಕೇವಲ ಕ್ಷುಲ್ಲಕ ಕಾರಣಗಳಿಗೆ ರಾಜ ನಿರಾಕರಿಸುವುದು, ನೌಕರರ ವಿರುದ್ದ ಅನುಚಿತ ಪದ ಪ್ರಯೋಗ ಮಾಡುವುದು, ಎಂ, ಎಲ್/ ಸಿ ಸಿ ಎಲ್ ರಜೆಯನ್ನು ಮಹಿಳಾ ಉದ್ಯೋಗಿಗಳಿಗೆ ನಿರಾಕರಿಸುವುದು ಇವೆ ಮುಂತಾದ ರೀತಿಯ ದಬ್ಬಾಳಿಕೆಗೆ ನೌಕರ ವರ್ಗ ರೋಸಿ ಹೋಗಿತ್ತು. ನೌಕರರನ್ನು ಶೋಷಿಸಿದ ಅಧಿಕಾರಿಗೆ ತಕ್ಕ ಬುದ್ದಿಯನ್ನು ಕಲಿಸಿತು
ಹಾವೇರಿ ವಿಭಾಗದ ನೌಕರ ಬಂಧುಗಳಿಗೆ ಅಭಿನಂದನೆಗಳು. ನಿಮ್ಮ ಹೋರಾಟ ಇತರರಿಗೆ ಮಾದರಿಯಾಗಲಿ. ಅಧಿಕಾರಿ ವರ್ಗ ಇನ್ನಾದರೂ ಬುದ್ದಿ ಕಲಿಯಲಿ.
ಪ್ರಾಮಾಣಿಕ ವಾಗಿ ದುಡಿಯುವ ನೌಕರ ಯಾವುದೇ ಹುಚ್ಚಾಟ ಗಳಿಗೆ, ಬೆದರಿಕೆಗೆ, ಬಗ್ಗುವುದಿಲ್ಲ ಎಂಬುದನ್ನು ಹಾವೇರಿ ವಿಭಾಗದ ನೌಕರರು ಇಂದು ತೋರಿಸಿದ್ದಾರೆ. ಕಾರ್ಯದರ್ಶಿ ಜೆ. ಸಿ ಜಯರಾಮ ನಾಯ್ಕ ಮತ್ತು ಎಲ್ಲಾ ಪದಾದಿಕಾರಿಗಳಿಗೆ ಶಿವಮೊಗ್ಗ ಪೋಸ್ಟ್ ತುಂಬು ಹೃದಯದ ಅಭಿನಂದನೆಗಳನ್ನು ಅರ್ಪಿಸುತ್ತದೆ.
No comments:
Post a Comment