[Image][Image][Image][Image]ಅಂಚೆ ನೌಕರರ ಮಕ್ಕಳಿಗೆ ಮತ್ತು ಇತರ ವಿದ್ಯಾರ್ಥಿಗಳಿಗೆ 'ಪರೀಕ್ಷಾ ಭಯ ನೇವರಿಸುವ ಬಗೆ ಮತ್ತು ಹೆಚ್ಚಿನ ಏಕಾಗ್ರತೆಯಿಂದ ಓದುವ ಮತ್ತು ಹೆಚ್ಚಿನ ಅಂಕಗಳನ್ನು ಪಡೆಯುವ ಬಗೆ " ವಿಚಾರದಬಗ್ಗೆ ಒಂದು ಕಾರ್ಯಾಗಾರವನ್ನು ಶಿವಮೊಗ್ಗ ನಗರದ ಡಿವಿಎಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ದಿನಾಂಕ ೦೬.೦೨.೨೦೧೧ ರಂದು ನಮ್ಮ ಸಂಘದ ವತಿಯಿಂದ ಏರ್ಪಡಿಸಲಾಗಿತ್ತು. ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಎಲ್ ಐಸಿ ಯನಿವೃತ್ತ ಕಾರ್ಮಿಕ ಮುಂದಾಳು ಕಾಂ.ಕೆ.ಎಲ್.ರಾವ್ ಆಗಮಿಸಿದ್ದರು. ಕಾಂ.ಪ್ರಕಾಶ್ ರಾವ್ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ವಾಗ್ಮಿ , ರೋಟರಿ /ಜೆಸಿ ಮುಂತಾದ ಸಂಸ್ಥೆಗಳ ಅಂತರ ರಾಷ್ಟ್ರೀಯ ಕೋಚ್ ಆದ ಶ್ರೀ ಎಸ್. ವಿ ಶಾಸ್ತ್ರಿ ಯವರು ಪ್ರಾರಂಬದಲ್ಲಿ ಒಂದು ದಿನದ ಕ್ರಿಕೆಟ್ ಪಂದ್ಯ, ಟ್ವೆಂಟಿ -ಟ್ವೆಂಟಿ ಕ್ರಿಕೆಟ್ ಪಂದ್ಯ ಇವುಗಳಿಗೂ ಮತ್ತು ಪರೀಕ್ಷೆಗಳಿಗೂ ಇರುವ ಸಾಮ್ಯತೆಯನ್ನು ಮನಮುಟ್ಟುವಂತೆ ತಿಳಿಸಿದರು. ಮುಂದುವರಿದ ಅವರು ಪರೀಕ್ಷೆಯಲ್ಲಿ ಬರೆಯುವ ಬಗೆ, ಯಾವುದೇ ಪ್ರೆಶ್ನೆಯನು ಬಿಡದೆ ಬರೆಯುವರೀತಿ, ಪರೀಕ್ಷೆಯ ಪ್ರೆಶ್ನೆ ಪತ್ರಿಕೆಗೆ ಅಂಕ ನೀಡುವ ರೀತಿ, ಪರೀಕ್ಷೆಯಲ್ಲಿ ಮಕ್ಕಳು ಸಾಮಾನ್ಯವಾಗಿ ಮಾಡುವ ತಪ್ಪುಗಳು, ಅವುಗಳನ್ನು ಹೋಗಲಾಡಿಸುವ ಬಗೆ, ಇವುಗಳ ವಿಚಾರವಾಗಿ ಉದಾಹರಣೆಯೊಂದಿಗೆ ವಿವರಿಸಿದರು. "ನಾನಲ್ಲದೇ ಬೇರಾರು " ಎಂಬ ಮಾತನ್ನು ನೆನಪಿಟ್ಟುಕೊಳ್ಳಲು ಕರೆ ನೀಡಿದ ಅವರು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಬಗೆ , ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳುವ ಬಗೆಯನ್ನು ತಮ್ಮ ಸ್ವಂತ ಕಥೆಯನ್ನು ಹೇಳಿ ನೆರೆದ ಮಕ್ಕಳನು ಮತ್ತು ಅವರ ತಂದೆ ತಾಯಿಯರನ್ನು ಪೋಷಕರನ್ನು ರಂಜಿಸಿದರು. ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ ನಂತರ ಅವರು ಸುಮಾರು ಒಂದು ಗಂಟೆಗಳ ಕಾಲವನ್ನು ಪ್ರಶ್ನೋತ್ತರ ಕಾಲವನ್ನಗಿ ಮೀಸಲಾಗಿಟ್ಟರು. ಇದರಲ್ಲಿ ಮಕ್ಕಳು ಮತ್ತು ಪೋಷಕರು ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡರು.
ಸುಮಾರು ೫೦ ಮಕ್ಕಳು ಬಮತ್ತು ಪೋಷಕರು ಭಾಗವಹಿಸಿದ್ದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಯಿತು. ಅಂತ್ಯದಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರೂಪ್ ಸಿ ಸಂಘದ ಅಧ್ಯಕ್ಷರಾದ ಕಾಂ.ಎಚ್. ರಾಜಪ್ಪನವರು ವಹಿಸಿದ್ದರು. ಕಾಂ.ಎಚ್.ಆರ್. ಈಶ್ವರಪ್ಪ ನವರು ವಂದನಾರ್ಪಣೆ ಮಾಡಿದರು. ಶ್ರೀ ಎಸ್.ವಿ ಶಾಸ್ತ್ರಿ ಯವರನ್ನು ಕಾಂ.ಜಿ.ರಾಘವೇಂದ್ರ ಮತ್ತು ಕಾಂ. ಎಚ್.ವಿ.ರಾಜ್ ಕುಮಾರ್ ಮತ್ತು ಕಾಂ.ಎಚ್.ರಾಜಪ್ಪ ಇವರುಗಳು ಸನ್ಮಾನಿಸಿದರು. [Image][Image][Image][Image].
No comments:
Post a Comment