Monday, July 12, 2010

ಜುಲೈ ೧೩ ರ ಮುಷ್ಕರ ಮುಂದಕ್ಕೆ!

ದಿನಾಂಕ ೧೨.೦೭.೧೦ ರಂದು ಇಲಾಖೆಯ ಕಾರ್ಯದರ್ಶಿ ಮತ್ತು ನೌಕರರ ಸಂಘಗಳ ನಡುವೆ ನಡೆದ ಮಾತುಕತೆಗಳ ನಂತರ ಹಾಗು ಮಾತುಕತೆಗಳು ಸಾಕಷ್ಟು ಧನಾತ್ಮಕ ಅಂಶಗಳಿಂದ ಕೂಡಿದ್ದರಿಂದ ಮಾತುಕತೆಗಳ ನಂತರ ಸೇರಿದ್ದ ಕೇಂದ್ರ ಅಂಚೆ ಜಂಟಿ ಕ್ರಿಯಾಸಮಿತಿಯು ಮುಷ್ಕರ ವನ್ನು ಮುಂದೂಡಲು ನಿರ್ದರಿಸಿದೆ.

ಮಾತುಕತೆಗಳ ಪ್ರಮುಖ ಅಂಶಗಳು.

. ಸಿ ದರ್ಜೆಯ ಅಂಚೆ ಕಛೇರಿಗಳ ಮುಚ್ಚುವ ಪ್ರಸ್ತಾಪವನ್ನು ನಿಲ್ಲಿಸಲಾಗುವುದು.

. ಹಿಂದಿನ ಜಿ ಡಿ ಎಸ್ ಪೋಸ್ಟ್ ಮಾಸ್ಟರ್ ಗಳಿಗೆ ವಾರ್ಷಿಕ ಇನ್ಕ್ರಿಮೆಂಟನ್ನು ನೀಡಬೇಕೆಂಬ ನೌಕರರ ಸಂಘಗಳ ಬೇಡಿಕೆಯನ್ನು ಧನಾತ್ಮಕವಾಗಿ ಪರಿಗಣಿಸಲಾಗುವುದು.

. ಅಂತರ ರಾಷ್ಟ್ರೀಯ ಸಲಹೆಗಾರ ಮೆಕೆನ್ಸಿ ವಿಚಾರದಲ್ಲಿ ಮತ್ತು ಅಂಚೆ ಸೇವೆಗಳ ರೀಸ್ತ್ರಕ್ಚರಿಂಗ್ ವಿಚಾರ ಚರ್ಚಿಸಲು ದಿನಾಂಕ ೧೫.೦೭.೨೦೧೦ ರಂದು ಪ್ರತ್ಯೇಕ ಸಭೆ ಕರೆಯಲಾಗುವುದು.

.ಯಾವುದೇ ಅಂಚೆ ಸೇವೆಗಳನ್ನು ಹೊರಗುತ್ತಿಗೆ/ಖಾಸಗೀಕರಣ ಮಾಡುವ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

. ಅಂಚೆ ಸೇವೆಗಳನ್ನು ತಾಂತ್ರಿಕವಾಗಿ ಮುಂದೆ ತರಲು ಮತ್ತು ಟೆಕ್ನಾಲಜಿ ಪ್ರಸ್ತಾಪಗಳನ್ನು ಚರ್ಚಿಸಲು ನೌಕರರ ಸಂಘಗಳ ಪ್ರತಿನಿಧಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ಕರೆದು ಚರ್ಚಿಸಲಾಗುವುದು.

. ಆರ್.ಎಂ ಎಸ್ ಗಳನ್ನು ಮುಚ್ಚುವ ವಿಚಾರದಲ್ಲಿ ಹಿಂದೆ ದಿನಾಂಕ ೩೦.೧೧.೨೦೦೯ ರಲ್ಲಿ ಆದ ತೀರ್ಮಾನದಂತೆ ನೆದೆದುಕೊಳ್ಳಲಾಗುವುದು.

. ಕಾಲ ಕಾಲಕ್ಕೆ ನಡೆಯಬೇಕಿದ್ದ ನೌಕರರ ಸಂಘಗಳ ಜೊತೆಗಿನ ಮೀಟಿಂಗ್ ಗಳನ್ನು ಇನ್ನು ಮುಂದೆ ಸರಿಯಾಗಿ ನಡೆಸಿಕೊಂಡು ಹೋಗಲಾಗುವುದು. ಮುಂದಿನ ಜೆ.ಸಿ.ಎಂ ಸಭೆಯನ್ನು ಆಗಸ್ಟ್ ತಿಂಗಳಲ್ಲಿ ನಡೆಸಲಾಗುವುದು.

ಹಿಂದಿನ ತಿಬಿಒಪಿ/ಬಿಸಿಆರ್ ಗಳಿಗೆ ಹೆಚ್ಚಿನ ವೇತನವನ್ನು ಮುಂದಿನ ಕೆಡರ್ ರೀಸ್ತ್ರಕ್ಚರಿಂಗ್ ಸಂದರ್ಭದಲ್ಲಿ ಪರಿಗಣಿಸಲಾಗುವುದು.

. ಪ್ರಾಜೆಕ್ಟ್ ಆರೋ ವಿಚಾರದಲ್ಲಿ ಯಾವುದೇ ಶೋಷಣೆ ಇರುವುದಿಲ್ಲ. ಇನ್ನುಮುಂದೆ ವಿತರಣೆ ಯಾಗದೆ ಇದ್ದ ಪತ್ರಗಳನ್ನು ವಿತರಣೆ ಎಂದೂ, ಅಥವಾ ರೀಡೈರೆಕ್ಟ್ ಎಂದೋ ತೋರಿಸುವಂತಿಲ್ಲ ಎಂಬ aಅಧೇಶ ನೀಡಲಾಗುವುದು

೧೦.ಎಲ್ಲ ಕೆಡರ್ ಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಕೂಡಲೇ ತುಂಬಲು ಅಧೆಶಿಸಲಾಗುವುದು. ಬಗ್ಗೆ ಎಲ್ಲ ಸಿ ಪಿ ಎಂ ಜಿ ಗಳ ಜೊತೆಗೆ ಸೆಕ್ರೆಟರಿ (ಪಿ) ಯವರು ವೀಡಿಯೋ ಕಾನ್ಫಾರೆನ್ಸ್ ನಡೆಸಲಿದ್ದಾರೆ.

೧೧. ಅಕ್ಟೋಬರ್ ೨೦೧೦ ಒಳಗಾಗಿ ಎಲ್ಲ ಕೆಡರ್ ಗಳಿಗೆ ರೀಸ್ತ್ರಕ್ಚರಿಂಗ್ ನಡೆಸಲಾಗುವುದು. ಸಂಭಂಧವಾಗಿ ಡಿ.ಡಿ.ಜಿ (ಪಿ) ಮತ್ತು ಡಿ.ಡಿ.ಜಿ (ಎಸ್ತಾಬ್ಲಿಷ್ಮೆಂಟ್) ಜೊತೆಗೆ ನೌಕರರ ಸಂಘದ ನಾಲ್ಕು ಪ್ರತಿನಿಧಿಗಳ ಸಮಿತಿಯೊಂದನ್ನು ರಚಿಸಲಾಗುವುದು.

೧೨. ಪೋಸ್ಟ್ ಮಾಸ್ಟರ್ ಕೆಡರ್ ಸ್ತಾಪನೆಗೆ ಪ್ರತ್ಯೇಕವಾಗಿ ಚರ್ಚಿಸಲಾಗುವುದು.

೧೩. ಜಿಡಿಎಸ್ ನೌಕರರಿಗೆ ಪಿಂಚಣಿ, ವೈದ್ಯಕೀಯ ಭತ್ಯೆ ವಿಚಾರದಲ್ಲಿ ಗಾಗಲೇ ಅಂಚೆ ಇಲಾಖೆಯು ಪ್ರಸ್ತವನೆಯೊಂದನ್ನು ಸಂಬದಿಸಿದ ಸಚಿವಾಲಯಕ್ಕೆ ಕಳುಹಿಸಿದ್ದು ಅನುಮೋದನೆಗಾಗಿ ಕಾಯಲಾಗುತ್ತಿದೆ. ವಿಚಾರವನ್ನು ತ್ವರಿತ ಗೊಳಿಸಲಾಗುವುದು.

೧೪. ಬಿ.ಪಿ.ಎಂ ಗಳ ಹಣಕಾಸು ನಿರ್ವಹಣ ಭತ್ಯೆ (೨೦೦೦೦ ರೂ ಗಳಿಗೆ ಪಾಯಿಂಟ್) ಪುನರ್ವಿಮರ್ಶೆ ಮಾಡಲಾಗುವುದು. ಜೊತೆಗೆ ಆರ್.ಪಿ.ಎಲ್, ಐ ಮತ್ತು ಏನ್, ಆರ್, ,ಜಿ,ಎಸ್ ಕೆಲಸಕ್ಕೆ ಕೆಲಸದ ಪ್ರಮಾಣವನ್ನು ಶೀಘ್ರದಲ್ಲೇ ನಿಗಧಿಪದಿಸಲಾಗುವುದು.

೧೫. ಜಿ.ಡಿ.ಎಸ್ ನೌಕರರ ರಜೆ ಅವಧಿಯಲ್ಲಿ ಕೆಲಸನಿರ್ವಹಿಸುವ ನೌಕರರಿಗೆ ಜಿ ಡಿ ಎಸ್ ನೌಕರರ ಹೊ ವೇತನದ ಆದರದಲ್ಲೇ ನೀಡಲಾಗುವುದು.

೧೬. ಪೋಸ್ಟ್ ಮ್ಯಾನ್ ನೌಕರರ ಬೀಟ್, ವಿತರಣೆ ಬಗ್ಗೆ ಕೆಲಸದ ಹೊಸ ಪ್ರಮಾಣದ ಬಗ್ಗೆ ತೀರ್ಮಾನಿಸಲು ಶೀಘ್ರದಲ್ಲೇ ಚರ್ಚಿಸಲಾಗುವುದು. ಪ್ರತ್ಯೇಕ ಸಮಿತಿಯೊಂದನ್ನು ಸಂಘಟಿಸಿ ಬಗ್ಗೆ ಅಕ್ಟೋಬರ್ ಅಂತ್ಯದೊಳಗಾಗಿ ನ್ಯಾಯಸಮ್ಮತವಾದ ತೀರ್ಮಾನವೊಂದನ್ನು ಕೈಗೊಳ್ಳಲಾಗುವುದು.

೧೭. ಎಂ ಸಿ ಪಿ ನೀಡುವಲ್ಲಿ ಈಗ ಇರುವ ಬೆಂಚ್ ಮಾರ್ಕ್ ಪದ್ದತಿಯನ್ನು ಕೂಡಲೇ ತೆಗೆದುಹಾಕಲು ಅಂಚೆ ಇಲಾಖೆ ಕಾರ್ಯದರ್ಶಿಗಳು ತೀರ್ಮಾನಿಸಿದ್ದು ಬಗ್ಗೆ ಇಂದೇ ಆದೇಶವನ್ನು ಜಾರಿಗೊಳಿಸಲು ಡಿ ಡಿ ಜಿ ಯವರಿಗೆ ಆದೇಶಿಸಿದ್ದಾರೆ.

೧೮.

No comments:

Post a Comment